‘ಆವರಣದ ಅನಾವರಣ’ ಕೃತಿಯು ನನ್ನ ವಿಮರ್ಶೆಯ ಲೇಖನಗಳ ಸಂಕಲನ. ಇಲ್ಲಿಯ ಎಲ್ಲಾ ಲೇಖನಗಳು ಉದಯಕಾಲ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಈ ಕೃತಿಯಲ್ಲಿ ಯುವ ಲೇಖಕರಾದಿಯಾಗಿ ಹಿರಿಯ ಲೇಖಕರ ಕೃತಿಗಳ ಕುರಿತು ವಿಮರ್ಷಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಯನ್ನು ಪ್ರಕಟಿಸಲು ನನಗೆ ಅತ್ಯಂತ ಖುಷಿ ಮತ್ತು ಹೆಮ್ಮೆ.
ಆವರಣದ ಅನಾವರಣವನ್ನು ನನ್ನ ಸಂಶೋಧನಾ ಮಾರ್ಗದರ್ಶಕ ಗುರುಗಳಾದ ඕව. ಗುರುಪಾದ ಮರೆಗುದ್ದಿಯವರಿಗೆ ಅರ್ಪಿಸುತ್ತಿದ್ದೇನೆ. ನನ್ನಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಸಂಶೋಧನೆ ಹಾಗೂ ವಿಮರ್ಶೆಯ ಮಾರ್ಗಗಳನ್ನು ತೋರಿಸಿದ ಗುರುಗಳಿಗೆ ಅರ್ಪಿಸಲು ಖುಷಿ. ಕನ್ನಡ ಸಂಶೋಧನೆ ಹಾಗೂ ವಿಮರ್ಶಾ ಪರಂಪರೆಯಲ್ಲಿ ಡಾ. ಗುರುಪಾದ ಮರೆಗುದ್ದಿಯವರು ಇಡೀ ಕರ್ನಾಟಕದಲ್ಲಿ ತಮ್ಮದೇ ಆದ ಮಾರ್ಗವನ್ನು ಹುಟ್ಟು ಹಾಕಿ ಹೊಸ ದಾರಿಯನ್ನು ಸೃಷ್ಟಿಸಿದವರು. ಅವರ ಮುಖಾಂತರ ದಿವಂಗತ ಗಿರಡ್ಡಿ ಗೋವಿಂದರಾಜ, ಡಾ ಬಿ. ಕೆ. ಹಿರೇಮಠ, ಡಾ. ಶ್ರೀರಾಮ್ ಇಟ್ಟಣ್ಣವರ, ಡಾ. ವಿಜಯ ಕುಮಾರ ಕಟಗಿಹಳ್ಳಿಮಠ, ව. ವೆಂಕಟಗಿರಿ ದಳವಾಯಿ, ව ವೀರಭದ್ರೇಗೌಡ, ಡಾ. ಬಸವರಾಜ ಡೋಣೂರ, ಡಾ ಬಾಳಾಸಾಹೇಬ ಲೋಕಾಪುರ, ಡಾ ಚನ್ನಪ್ಪ ಕಟ್ಟಿ, ಡಾ. ವಿಕ್ರಮ ವಿಸಾಜಿ, ಡಾ. ವಿ. ಎಸ್. ಮಾಳಿ, ಡಾ. ರಾಗಂ, ಡಾ ಚಂದ್ರಶೇಖರ ವಸ್ತ್ರದ, ಡಾ ರಹಮತ ತರೀಕೆರೆ, ಡಾ ಅಮರೇಶ ನುಗಡೋಣಿ, ಡಾ ಬಿ. ಎಂ. ಪುಟ್ಟಯ್ಯ, ಶ್ರೀಮತಿ ಸಭಿಹಾ ಭೂಮಿಗೌಡ, ಶ್ರೀಮತಿ ಜಿ. ಬಿ. ಆಣಿಪ್ಪನವರ, ಶ್ರೀಮತಿ ಶಶಿಕಲಾ ಮೊರಬದ, ಶ್ರೀಮತಿ ಮಹಾನಂದ ಪಾಟೀಲವರಲ್ಲದೆ ಹೊಸ ತಲೆಮಾರಿನ ಬರಹಗಾರರಾದ তে. ಸಣ್ಣವೀರಣ್ಣ ದೊಡ್ಡಮನಿ, ನಾಗರಾಜು, ಎಂ ನಂಜುಂಡಸ್ವಾಮಿ, ಡಾ. ಜಿ.ಆಯ್. ನಂದಿಕೋಲಮಠ, ಡಾ. ಎಸ್.ಡಿ. ಕೆಂಗಲಗುತ್ತಿ, ಡಾ ಕೆ. ಎಸ್. ಹಿರೇಮಠ, ನವಿಲು ಕವಿ ಶ್ರೀಹರಿ ಧೂಪದ ಮುಂತಾದವರ ಒಡನಾಟ ಬೆಳೆದು ಓದು ಬರಹದ ವಿಸ್ತಾರ ವೇದಿಕೆಯನ್ನು ಪಡೆಯಲು ಅನುಕೂಲಕರ ವಾತಾವರಣವನ್ನು ನಿರ್ಮಿಸಿದವರು.
Reviews
There are no reviews yet.