Sale

Original price was: ₹699.00.Current price is: ₹559.20.

ಪ್ರೇಮ ಕಾವ್ಯ

978-93-5747-142-8 PAPERBACK FIRST EDITION , ,

Meet The Author

ಪ್ರೇಮದ ಭಿತ್ತಿಫಲಕದಲ್ಲಿ ಕಾರ್ಮಿಕರ ಬದುಕು ಬವಣೆಗಳ ಚಿತ್ರಣ ರಾಮಮೂರ್ತಿ ಸೋಮನಹಳ್ಳಿಯವರು ‘ಪ್ರೇಮಕಾವ್ಯ’ ಎಂಬ ತನ್ನ ಈ ಮೂರನೆಯ ಕಾದಂಬರಿಗೆ ಮುನ್ನುಡಿಯ ನಾಲ್ಕು ಮಾತುಗಳನ್ನು ಬರೆದು ಕೊಡಬೇಕೆಂದು ನನ್ನನ್ನು ಕೇಳಿಕೊಂಡಿದ್ದಾರೆ, ಸಾಹಿತ್ಯ ಪ್ರೀತಿಯ ಸಹೃದಯೀ ವ್ಯಕ್ತಿ ರಾಮಮೂರ್ತಿಯಂಥವರು ಕೇಳಿದ ಮೇಲೆ ‘ಇಲ್ಲ’ ಅನ್ನುವುದು ಹೇಗೆ? ಓದಿದ ಮೇಲೆ ಅರೇ! ಎಷ್ಟೊಂದು ಚೆನ್ನಾಗಿ ಬರೆದಿದ್ದಾರೆ ಅನಿಸಿತು. ಇಲ್ಲಿ ಬರೆದಿರುವ ನಾಲ್ಕು ಮಾತುಗಳನ್ನು ಈ ಕಾದಂಬರಿಯೇ ಬರಸಿಕೊಂಡಿದ ಎಂದು ಸಹೃದಯ ವಾಚಕರು ಭಾವಿಸಬಹುದು.

ರಾಮಮೂರ್ತಿಯವರನ್ನು ನಾನು ಕಳೆದ ಸುಮಾರು ಮೂವತ್ತಮೂರು ವರ್ಷಗಳಿಂದ ಬಟ್ಟೆ, ಅವರು ಮೂಲತಃ ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿಯವರು. ತನ್ನ ಔದ್ಯೋಗಿಕ ಜೀವನದ ಆರಂಭದಲ್ಲಿ ಸುಮಾರು ಐದು ವರ್ಷಗಳ  ಕಾಲ ಹಾಸನದಲ್ಲಿ. ‘ಜನಮಿತ್ರ’ ದಿನಪತ್ರಿಕೆಯ ಉಪಸಂಪಾದಕರಾಗಿ ಕೆಲಸ ಮಾಡಿ ಪತ್ರಿಕೋದ್ಯಮದ ಮೂಲಕವಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಅನಂತರ ಸರಕಾರಿ ಸೇವೆಗೆ ಸೇರ್ವಡೆಗೊಂಡು ಪದೋನ್ನತಿ ಹೊಂದಿ ಕಾರ್ಮಿಕ ನಿರೀಕ್ಷಕ ಹುದ್ದೆಯಿಂದ ನಿವೃತ್ತರಾದರು. ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರ

ಚಿಕ್ಕಂದಿನಿಂದಲೇ ಕಥೆ ಕವನ ಬರೆಯುತ್ತಿದ್ದ ರಾಮಮೂರ್ತಿಯವರಿಗೆ ಸರಕಾರಿ ಸೇವೆಯ ಅವಧಿಯಲ್ಲಿ ಕೆಲಸದ ಒತ್ತಡದಿಂದಾಗಿ ಹೆಚ್ಚು ಬರವಣಿಗೆ ಮಾಡಲಾಗಲಿಲ್ಲ. ಈಗ ವಾಲೆ ದು ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾದ ಬಳಿಕ ಸಾಹಿತ್ಯ ವ್ಯವಸಾಯ ಮುಂದುವರಿಸಿದ್ದಾರೆ. ಈಗಾಗಲೇ ‘ವಿಧಿಯ ಬಲೆಯಲ್ಲಿ’ (2021) ಮತ್ತು ‘ಆ ಒಂದು ಕ್ಷಣ’ (202) ಎಂಬ ಎರಡು ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ, ಇವರ ಸಂಪಾದಕತ್ವದಲ್ಲಿ ಎರಡು ಕವನ ಸಂಕಲನ ಮತ್ತು ಒಂದು ನಾಟಕ ಸಹ ಬೆಳಕು ಕಂಡಿವೆ.

ರಾಮಮೂರ್ತಿ, ಓರ್ವ ಕ್ರಿಯಾಶೀಲ ವ್ಯಕ್ತಿ, ಸುಮ್ಮನೇ ಕುಳಿತುಕೊಳ್ಳುವ ಜಾಯಮಾನದವರಲ್ಲ, ವ್ಯಕ್ತಿಯಲ್ಲಿದ್ದಾಗ ಮಂಗಳೂರಿನ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಖಜಾಂಚಿಯಾಗಿ ಮತ್ತು ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ ನಾಟಕಗಳಲ್ಲಿ ಅಭಿನಯಿಸುತ್ತಾರೆ. ಆಗೀಗೊಮ್ಮೆ ನಾಟಕ ರಚನೆ ಮಾಡುತ್ತಾರೆ, ಸಾಹಿತ್ಯ ಕಾರ್ಯಕ್ರಮಗಳಿಗೆ ತಪ್ಪದ ಹಾಜರಾಗುತ್ತಾರೆ. ಎಲ್ಲಿಗೆ ಹೋದರೂ ತನ್ನ ಇರುವಿಕೆಯನ್ನು ಪ್ರತಿಷ್ಠಾಪಿಸುವ ವ್ಯಕ್ತಿತ್ವ ಅವರದು, ಒಂದು ರೀತಿಯಲ್ಲಿ ಕನ್ನಡದ ಕಟ್ಟಾಳು ಎಂದರೂ ನಡೆಯುತ್ತದೆ.

ಪ್ರಸ್ತುತ. ತನ್ನ ಹಿಂದಿನ ಹವ್ಯಾಸವಾದ ಸಾಹಿತ್ಯ ರಚನೆಯನ್ನು ಮತ್ತೆ ಬಿರುಸಿನಿಂದ ಕೈಗೆತ್ತಿಕೊಂಡಿರುವ ರಾಮಮೂರ್ತಿಯವರು ಸಾಹಿತ್ಯ ವ್ಯವಸಾಯಿ ಮಾತ್ರವೇ ಅಲ್ಲ, ಬಿಡುವಿನ ವೇಳೆ ಗೆಳೆಯರೊಂದಿಗಿನ ಸೊಗಸಾದ ಮಾತುಗಾರಿಕೆ ಮತ್ತು ಮೈನೋದಿಕ ಹರಟೆಗಾಗಿಯೂ ಹೆಸರಾದವರು. ತನ್ನ ಹಾಸ್ಯಮಾತುಗಳಿಂದ ಸುತ್ತಲಿನವರನ್ನು ನಗೆಗಡಲಿನಲ್ಲಿ ತೇಲಿಸುವರು. ಇತ್ತೀಚೆಗೆ ಯು ಟ್ಯೂಬ್ ನಲ್ಲಿ ನಗೆ ಸ್ಕಿಟ್ ಗಳನ್ನು ಹಾಕಿ ಜನಪ್ರಿಯರಾಗಿದ್ದಾರೆ. ಬದುಕೆಂದರೆ ಗಂಭೀರ ಒತ್ತಡದ ಸ್ಫೋಟಕ ಸಾಮಾಗ್ರಿಯಲ್ಲ, ನಗುನಗುತ್ತ ಹಾಯಿದೋಣಿಯಲ್ಲಿ ತೇಲಿ ಹೋಗುವ ತಂಗಾಳಿಯ ಸೇಚನ ಎಂಬುದನ್ನು ತನ್ನ ನಡೆನುಡಿಯಲ್ಲಿ ತೋರಿಸಿಕೊಡುತ್ತಿರುವವರು.

ಕಾದಂಬರಿಕಾರರು ಕಾರ್ಮಿಕ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವುದರಿಂದ ಸಮಾಜದ ಕೆಳಸ್ತರದವರ ಬದುಕಿನ ಆಗುಹೋಗುಗಳನ್ನು ಪ್ರತ್ಯಕ್ಷವಾಗಿ ಅರಿತುಕೊಳ್ಳಲು ಸಹಾಯಕವಾಗಿದೆ, ಅದರಿಂದಾಗಿ ಕಾರ್ಮಿಕ ವರ್ಗದವರ ಬದುಕು ಬವಣೆಗಳ ಚಿತ್ರಣ ಕಾದಂಬರಿಯಲ್ಲಿ ಸಹಜವಾಗಿ – ಅಥೆಂಟಿಕ್ ಆಗಿ ಮೂಡಿಬಂದಿದೆ. ಕಾರ್ಮಿಕರ ಕುಟುಂಬದ ಕಷ್ಟ ಸಂಕಟಗಳು, ಅವರಲ್ಲಿ ಕಂಡುಬರುವ ದುರಭ್ಯಾಸಗಳು, ಅವರನ್ನು ದುರುಳರು ಉಪಯೋಗಿಸಿಕೊಳ್ಳುವ ಪರಿ, ಮಾನವ ಕಳ್ಳಸಾಗಣೆ ಮೊದಲಾದ ವಿವರಗಳು ಕಾದಂಬರಿಯ ಉದ್ದಕ್ಕೂ ಹಣಿದುಕೊಂಡಿವ, ಸತ್ತಾರ್ “ಎಂಬೊಬ್ಬ ಕಾರ್ಮಿಕ ದಲ್ಲಾಳಿ, ಸುರೇಶ್ ಎಂಬೊಬ್ಬ ಕಾರ್ಮಿಕ ಮುಖಂಡ ಮೊದಲಾದವರು ಪ್ರಾತಿನಿಧಿಕವಾಗಿ ಕಥಾ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ಪಾಪಕೃತ್ಯಗಳಿಂದ ಹಾಗೂ ತಾನೇ ನೇಯ್ದುಕೊಂಡ ವಿಷವರ್ತುಲದ ಸುಳಿಯಲ್ಲಿ ಸಿಲುಕಿಕೊಂಡ ಆ ಕಾರ್ಮಿಕ ಮುಖಂಡನ ದುರಂತ ಅವಸಾನವೂ ನಡೆದು ಹೋಗುತ್ತದೆ.

ಕಾವ್ಯ ಎಂಬ ಹೆಣ್ಮುಮಗಳು ಇಲ್ಲಿನ ಕಥಾನಾಯಕಿ, ಮುಗ್ಧ, ಆದರೆ ದಿಟ್ಟೆ. ಮತ್ತೊಂದು ಗಮನ ಸೆಳೆವ ಪ್ರಧಾನ ಪಾತ್ರ ಸುಧಾ, ದುರುಳರ ಕೈಗೆ ಸಿಲುಕಿ ಶೋಷಣೆಗೆ ಒಳಗಾಗುತ್ತಾಳೆ, ಅನೇಕ ಅಮಾಯಕ ಮಹಿಳಾ ಕಾರ್ಮಿಕರು ಕೂಲಿ

ರಾಷ್ಟ್ರಕ್ಕೆ ಸಾಗಿಸಲ್ಪಟ್ಟು, ಪಡಬಾರದ ಪಾಡು ಪಡುವುದನ್ನು, ಮನಗಂಡು ಖಂಡಿಸುತ್ತಾಳೆ, ಬದುಕಿನ ಬಗೆಗಿನ ಆಕೆಯ ವಿಧಾಯಕ ದೃಷ್ಟಿ, ಕಷ್ಟಸಹಿಷ್ಣುತೆ ಮತ್ತು ಒಳ್ಳೆಯತನಗಳು ಆಕೆಯನ್ನು ಕಾಪಾಡುತ್ತವೆ, ಕಾವ್ಯ ತನ್ನ ಧೈರ್ಯ ಸಾಹಸದ ವ್ಯಕ್ತಿತ್ವದಿಂದಾಗಿ ಕಷ್ಟಪಟ್ಟು, ಭೂಸೇನೆಗೆ ಸೇರಿಕೊಳ್ಳುತ್ತಾಳೆ. ಕುಟುಂಬದವರ, ಸ್ನೇಹಿತರ ಪ್ರಶಂಸೆಗೆ ಪಾತ್ರಳಾಗಿ ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳುತ್ತಾಳೆ ಎಂಬುದು ಒಟ್ಟು ಕಥಾನಕ.

ಅವರ ಈ ಕಾದಂಬರಿ ‘ಪ್ರೇಮಕಾವ್ಯ’ ಕೂಡ ಅದನ್ನೇ ಸಂಕೇತಿಸುವಂತಿದೆ. ಆದರೆ ಇಲ್ಲಿನದು ನಮ್ಮ ಸಿನಿಮಾ ಕಥೆಗಳ ಹಾಗೆ ಮರಸುತ್ತುವ ಮಾಮೂಲಿ ಪ್ರೇಮಕಥನವಲ್ಲ, ಜೀವನದಲ್ಲಿ. ಸಾಕಷ್ಟು ಕಷ್ಟ ಸಂಕಟ ದುಃಖ ದುಮ್ಮಾನಗಳನ್ನು ಅನುಭವಿಸಿದ ಬಳಿಕ ಹೂ ಅರಳಿದ ಹಾಗೆ ಸಲೀಲವಾಗಿ ಒಲಿದು ಬರುವ ಮಂದಾನಿಲದಂತಹ ಪ್ರೇಮ ಅದು. ಹಾಗೆಂದು ಅವರದನ್ನು ವಾಚ್ಯವಾಗಿ ಹೇಳುವುದಿಲ್ಲ, ಕಾದಂಬರಿಯ ಕೊನೆಯಲ್ಲಿ ಧ್ವನಿಪೂರ್ಣವಾಗಿ ಚಿತ್ರಿಸಿ ಮುಗಿಸಿ ಬಿಡುತ್ತಾರೆ. ಹೆಸರು ಪ್ರೇಮಕಾವ್ಯ ಎಂದಿದ್ದರೂ ಗಂಭೀರವಾದ ಸಾಮಾಜಿಕ ಸಮಸ್ಯೆಯೊಂದನ್ನು ಎತ್ತಿಕೊಂಡು ಅವರು ಈ ಕಾದಂಬರಿ ರಚಿಸಿದ್ದಾರೆ. ಬಡ ಶ್ರಮಿಕ ವರ್ಗದವರ ನಿತ್ಯಬದುಕಿನ ಜಂಜಡ ಮತ್ತು ಕಷ್ಟ ಕಾರ್ಪಣ್ಯಗಳೇ ಇಲ್ಲಿನ ಕಥಾನಕದ ಮುಖ್ಯ ಭೂಮಿಕೆಯಾಗಿದೆ.

ಕಾದಂಬರಿಯ ವಸ್ತು ವಿಷಯ ಅಪರೂಪದ್ದಾಗಿದ್ದು ಕಥೆಯ ಸಹಜವಾದ ನಡೆ, ಓಪ್ಪ ಕಥನಶೈಲಿ ಮೊದಲಾದವುಗಳಿಂದಾಗಿ ಹಿತವಾಗಿ, ಓದಿಸಿಕೊಂಡು ಹೋಗುತ್ತದೆ. ಕಥನಕ್ಕೆ ಪೂರಕವೆಂಬಂತ ಲಾಘವದಲ್ಲಿ ನರ್ತಿಸುವ ಹಳೇಮ್ಮೆಸೂರು ಮತ್ತು ಕರಾವಳಿ ಭಾಗದ ಒಂದು ಸಮ್ಮಿಶ್ರಣದ ಭಾಷೆ ಕುತೂಹಲಕಾರಿಯಾಗಿದೆ. ವಸ್ತುವಿನ ರೂಪಸ್ವರೂಪಗಳು ಮತ್ತು ಅದರ ಹರಹು ಹಾಗೂ ವ್ಯಾಪ್ತಿ, ತಾಂತ್ರಿಕವಾಗಿ ಈ ಕೃತಿಯನ್ನು ಗೆಲ್ಲುವಂತೆ ಮಾಡಿರುವ ಅಂಶಗಳು ಅನಿಸುತ್ತದೆ. ಕಾದಂಬರಿಕಾರನ ಜೀವನಾನುಭವ ಮತ್ತು ಕಲೆಗಾರಿಕೆಯ ಕೌಶಲ ಕೃತಿಯ ಒಟ್ಟಂದದಲ್ಲಿ ವ್ಯಾಪಿಸಿಕೊಂಡುದು ನಮ್ಮ ಗಮನಕ್ಕೆ ಬರುತ್ತದೆ.

ಆದರೆ ಕಾದಂಬರಿಯ ಒಟ್ಟೂ ಚಿತ್ರಣ ಮತ್ತು ನಿರೂಪಣೆಯು ವಿಷಯದ ಮೇಲ್ ಸ್ತರದ ಸರಳೀಕೃತ ವಿವರಗಳಲ್ಲಿ ವಿರಮಿಸಿದ ಹಾಗೆ ತೋರುತ್ತದೆ. ವಸ್ತುವಿನ ಬಗೆಗಿನ ಬೀಸುನೋಟವು ಬದುಕಿನ ಸಂಕೀರ್ಣ ಸಮಸ್ಯೆಗಳನ್ನು ಕುರಿತು ವ್ಯವಹರಿಸುವುದಿಲ್ಲ, ಮತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಎಂದು ಅನಿಸಿದರೂ ಅದನ್ನೊಂದು ಕೊರತೆ ಎಂದು ಭಾವಿಸಬೇಕಾಗಿಲ್ಲ. ಯಾಕೆಂದರೆ ಕಾದಂಬರಿಯ ನಿರೂಪಣೆಯ ಕ್ರಮದಲ್ಲಿ ಅಂದರ ಅದರ ಮ್ಯಾಟರ್ ಆಫ್ ಫ್ಯಾಕ್ಷ ಚಿತ್ರಣದ ವಿಧಾನದಲ್ಲಿ – ತಳಮಟ್ಟದ ಬದುಕಿನ ಕುರಿತಾದ ಒಂದು ಕಥನವನ್ನೇ ತನಗೆ ಮುಖ್ಯವಾಗಿದ್ದು, ಉಳಿದ ಅಂಶಗಳು ಗೌಣ ಎಂಬುದನ್ನು ಕಾದಂಬರಿಕಾರರು ನಿರೂಪಿಸುವಂತಿದೆ.

ಕೃತಿಯನ್ನು ಓದಿದ ಬಳಿಕ ಅದರ ವಿಶ್ಲೇಷಣೆ ಓದುಗನಿಗೆ ಬಿಟ್ಟಿದ್ದು, ಕೃತಿಕಾರ ಘಟನೆಯನ್ನು ಸವಿವರವಾಗಿ ಬಿಚ್ಚಿಟ್ಟ ಮೇಲೆ ಓದುಗ ತನ್ನ ಬದುಕಿನ ಹಿನ್ನೆಲೆ ತನ್ನ ಸಂಸ್ಕಾರ ಮತ್ತು ತನ್ನ ಅನುಭವದಿಂದ ಅದನ್ನು ಪ್ರವೇಶ ಮಾಡುತ್ತಾನೆ ಅಂದರೆ ಪ್ರತಿಯೊಬ್ಬ ಓದುಗನಲ್ಲಿಯೂ ಅದು ಮರುಸೃಷ್ಟಿ ಆಗುತ್ತ ಹೋಗುತ್ತದೆ. ಅದು ಸಜನಶೀಲ ಕೃತಿಯೊಂದರ ಹೆಚ್ಚುಗಾರಿಕೆ ಮತ್ತು ವಿಶೇಷತೆಯೂ ಹೌದು, ಕಾದಂಬರಿ ಪ್ರಕಾರ ಕೂಡ ಅಂಥವುಗಳಲ್ಲಿ ಒಂದು.

ಈ ಪ್ರವಾದ ಒಂದು ಭಿತ್ತಿಯಲ್ಲಿ, ಬದುಕಿನ ರೂಪವಿನ್ಯಾಸಗಳನ್ನು ತೆರೆದಿಡುವ ಕಾದಂಬರಿ ಪ್ರಕಾರವು ಇಪ್ಪತ್ತು ಹಾಗೂ ಈ ಇಪ್ಪತ್ತೊಂದನೇ ಶತಮಾನದಲ್ಲಿ, ವೈವಿಧ್ಯಮಯವಾಗಿ ಅರಳಿ ವಿಕಾಸಗೊಂಡುದನ್ನು ಕಂಡಿದ್ದೇವೆ. ಬಹುತೇಕ

ಎಲ್ಲ ಗದ್ಯ ಬರಹಗಾರರನ್ನ ಈ ಪ್ರಕಾರವು ತೀವವಾಗಿ ಕಾಡಿದೆ, ಬದುಕಿನ ಒಂದು ಮುಖವನ್ನೇ ಆದರೂ ಸಮಗ್ರವಾಗಿ ಮತ್ತು ಸಮನ್ವಯತೆಯಿಂದ ವಿಶ್ಲೇಷಣಾತ್ಮಕ ಒಳಗಣ್ಣಿನ ಮೂಲಕ ಪ್ರಾತಿನಿಧಿಕ ಸ್ವರೂಪದಲ್ಲಿ ಚಿತ್ರಿಸಲು ಸಾಧ್ಯವಾಗುತ್ತದೆ ఎంబ ಕಾರಣಕ್ಕಾಗಿ ಈ ಪ್ರಕಾರವು ಇಷ್ಟೊಂದು ಜನಪ್ರಿಯತೆಯನ್ನು ಪಡೆದಿರಬೇಕೆಂದು ತೋರುತ್ತದೆ. ಕನ್ನಡದಲ್ಲಿ ಈ ಪ್ರಕಾರವು ಹುಟ್ಟಿ, ಸುಮಾರು ನೂರಾಮೂವತ್ತು ವರ್ಷಗಳು ಕಳೆದರೂ ಇವತ್ತಿಗೂ ನಿತ್ಯನೂತನವಾಗಿ ನವೋನವವಾಗಿ ಲೇಖಕರ ಮತ್ತು ಓದುಗರ ನಡುವೆ ಭಾವಸೇತುವಾಗಿ ಉಳಿದುಬಿಟ್ಟಿದೆ. ಎಲೆಕ್ಟ್ರಾನಿಕ್ ಮಾಧ್ಯಮದ ಧಾರಾವಾಹಿಗಳು ಕಾದಂಬರಿಯ ಇನ್ನೊಂದು ರೂಪವಲ್ಲದ ಇನ್ನೇನು? ಕಾದಂಬರಿ, ಪುಕಾರದ ಆಕರ್ಷಣೆ ರಾಮಮೂರ್ತಿಯವರನ್ನೂ ಬಿಟ್ಟಿಲ್ಲ! ಮೂರು ವರ್ಷಗಳಲ್ಲಿ ಮೂರು ಕಾದಂಬರಿ ಬರೆದ ಶ್ರೇಯಸ್ಸು ಅವರದು!

ರಾಮಮೂರ್ತಿಯವರು ಶ್ರದ್ಧೆಯ ಪ್ರಯತ್ನ ಹಾಕಿ ಈ ಕೃತಿಯನ್ನು ರಚಿಸಿದ್ದಾರೆ. ಅವರ ವ್ಯವಸಾಯ ಹುಸಿಹೋಗುವುದಿಲ್ಲ. ಎಂದು ಧೈರ್ಯದಿಂದ ಹೇಳಬಹುದು. ಶ್ರಮಿಕ ವರ್ಗದ ಬದುಕಿನ ಒಳಾಂಗಣದ ಕುರಿತು ನಮಗೆ ಗೊತ್ತಿರದ ಹಲವು ಸಂಗತಿಗಳ ಬಗ್ಗೆ ನಮ್ಮ ಕಣ್ಣು ತೆರೆಸುವಲ್ಲಿ ಅವರು ಸಫಲರಾಗಿದ್ದಾರೆ. ಸಮಾಜವನ್ನು ವಿಚಿಕಿತ್ಸಕ ದೃಷ್ಟಿಯಿಂದ ನೋಡುವ ಮತ್ತು ನೂತನ ವಸ್ತುವಿಷಯಗಳನ್ನು ತಕ್ಕ ಅಭಿವ್ಯಕ್ತಿಯಲ್ಲಿ ಹಿಡಿದಿಡುವ ಅವರ ಕುಶಲತೆಗಾಗಿ ನಾವು ಅವರನ್ನು ಅಭಿನಂದಿಸಬೇಕು. ಅವರ ಮುಂದಿನ ರಚನೆಗಳನ್ನು ಓದುಗರು ಕುತೂಹಲದಿಂದ ನೋಡುವಂತೆ ಮಾಡುವಲ್ಲಿ ಈ ಕಾದಂಬರಿ ಶ್ರಮಿಸಿದ ಅನ್ನುವುದರಲ್ಲಿ ಎರಡು ಮಾತಿಲ್ಲ.

Reviews

There are no reviews yet.

Be the first to review “ಪ್ರೇಮ ಕಾವ್ಯ”

Your email address will not be published. Required fields are marked *