Sale

Original price was: ₹365.00.Current price is: ₹292.00.

PADMA PATRE

978-93-7020-598-7 Paperback First , ,
Share

Meet The Author

ಕನ್ನಡ ಭಾಷೆಯೆಂಬುದು ಬಾಲ್ಯಾವಸ್ಥೆಯಿಂದಲೇ ಒಂದು ಕುತೂಹಲ ತಣಿಸುವ ವಿಷಯವಾಗಿತ್ತು. ಅಕ್ಷರಗಳ ಬರವಣಿಗೆಯೇ ಒಂದು ರೀತಿ ಮೆರಗು ತಂದಿತ್ತು. ಜೊತೆಗೆ ವಿಷಯಗಳ ಓದು ಎಂಬುದು ನನಗೆ ಪುಸ್ತಕಗಳಿಗಿಂತ, ನನ್ನ ತಂದೆಯ ದಿನಸಿ ಅಂಗಡಿಗೆ ಹಾಕುವ ರದ್ದಿ ಪತ್ರಿಕೆಯ ಮೂಲಕವೇ ನಡೆಯುತ್ತಿತ್ತು. ಅವುಗಳಿಂದಲೇ ನನ್ನ ಜ್ಞಾನ ಪ್ರಪಂಚದ ಬಾಗಿಲು ತೆರೆದದ್ದು. ನಂತರದಲ್ಲಿ ನನ್ನ ಜೀವನದ ಹಾದಿ ತಂತ್ರಜ್ಞಾನ ಪ್ರಪಂಚದ ಕಡೆಗೆ ಹರಿದಾಗ, ಕನ್ನಡ ಲೋಕವು ಸ್ವಲ್ಪ ಮರೆಯಾಯಿತು. ಮಗುವು ತಾಯಿಯನ್ನು ಮರೆಯಬಹುದು. ಆದರೆ ತಾಯಿಯು ಮಗುವನ್ನು ಎಂದಿಗೂ ಮರೆಯುವುದಿಲ್ಲ, ಅಲ್ಲವೇ? ಹಾಗಾಗಿ ನನ್ನ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿದ ಕೆಲವು ಸಮಯಗಳಲ್ಲಿಯೇ ಆ ಕನ್ನಡ ತಾಯಿಯು ಬಂದು ನನ್ನನ್ನು ಅಪ್ಪಿ ಮುದ್ದಾಡಲು ಆರಂಭಿಸಿಯೇಬಿಟ್ಟಳು. ಆಕೆಯ ಆ ಹಾಲ್ನಗೆಯಲ್ಲಿ, ನನ್ನುಡಿಯಲ್ಲಿ, ನಲಿವ ಕೂಸಾಗಿ ಈಗ ಬೆಳೆಯುತ್ತಾ ಇದ್ದೇನೆ. ಬೆಳೆವ ಈ ದಾರಿಯಲ್ಲಿ ಸುಪುಷ್ಟಿಯಾದ ಸುಭೋಜನದ ಖಾದ್ಯವನ್ನು ಉಣಿಸಿದವರು ಎಂದರೆ ಪಿತೃಸಮಾನರು ಮತ್ತು ಎನ್ನ ಗುರುಗಳಾದ ಶ್ರೀ ಹಿರೇಮಗಳೂರು ಕಣ್ಣನ್ ಮಾಮರವರು. ಸದಾ ನನ್ನ ಮಾರ್ಗದರ್ಶಕರಾಗಿ, ಪ್ರೋತ್ಸಾಹಿಸಿ ತಿದ್ದಿ ನೀಡುವ ಚೈತನ್ಯಮಯ ಜೀವವದು. ಅವರ ಕಾರುಣ್ಯವಿಲ್ಲದೇ ಈ ನನ್ನ ಸಾಹಿತ್ಯ ಬದುಕು ನಿಸ್ತೇಜವೇ ಎನ್ನಬಹುದು.

Reviews

There are no reviews yet.

Be the first to review “PADMA PATRE”

Your email address will not be published. Required fields are marked *

P
U
B
L
I
S
H

Y
O
U
R

B
O
O
K