ಸ್ವತಂತ್ರ ಭಾರತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲು ಹಲವಾರು ಸರ್ಕಾರಗಳು ವಿವಿಧ ಯೋಜನೆಗಳ ಮುಖಾಂತರ ಕ್ರಮಗಳನ್ನು ಕೈಗೊಂಡರು ಸಹ ಹೆಣ್ಣು ಮಕ್ಕಳ ಶಿಕ್ಷಣ ನಿರೀಕ್ಷಿತ ಮಟ್ಟ ತಲಪದಿರುವುದು ಕಂಡು ಬರುತ್ತದೆ. ಅದರಲ್ಲೂ ದುರ್ಬಲ ವರ್ಗದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿರವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಇಂತಹ ತಾರತಮ್ಯಗಳನ್ನು ತೊಡೆದುಹಾಕಲು ಕೇಂದ್ರ ಸರ್ಕಾರವು ಮಹಿಳಾ ಸಾಕ್ಷರತೆ ಕಡಿಮೆ ಇರುವ ಪ್ರದೇಶಗಳನ್ನು ಗುರುತಿಸಿ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯಗಳನ್ನು 2005-06 ನೇ ಸಾಲಿನಿಂದ ಪ್ರಾರಂಬಿಸಿದೆ ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಶಾಲೆಯಿಂದ ಹೊರಗುಳಿದ ಪ್ರಾಥಮಿಕ ಶಾಲಾ ಹಂತವನ್ನು ಪೂರೈಸದ ಹೆಣ್ಣುಮಕ್ಕಳು, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಬಡತನ ರೇಖೆಗಿಂತ ಕೆಳಗಿರವ ಹೆಣ್ಣು ಮಕ್ಕಳು. ಶಾಲೆ ಬಿಟ್ಟ ಹೆಣ್ಣು ಮಕ್ಕಳು ಶೋಷಿತ ದೇವದಾಸಿ ಪದ್ಧತಿಯಿಂದ ರಕ್ಷಸಲ್ಪಟ್ಟ ಹೆಣ್ಣು ಮಕ್ಕಳು, ಬಾಲಕಾರ್ಮಿಕ ಹೆಣ್ಣು ಮಕ್ಕಳು, ಮಕ್ಕಳ ಮಾರಾಟ ಮತ್ತು ಸಾಗಾಣಿಕೆಯಿಂದ ರಕ್ಷಿಸಲಟ್ಟ ಹೆಣ್ಣು ಮಕ್ಕಳು ಶಿಕ್ಷಣ ವಂಚಿತ ಇಂತಹ ಹೆಣ್ಣು ಮಕ್ಕಳಿಗೆ 6 ರಿಂದ 8ನೇಯ ತರಗತಿವರೆಗೆ ಗುಣಾತ್ಮಕ ಶಿಕ್ಷಣ ನೀಡಲು ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯಗಳನ್ನು ಪಾರಂಬಿಸಲಾಗಿದೆ.
ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಗಳಲ್ಲಿ ಅಧ್ಯಯನ ಮಾಡುತಿರುವ ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆಯನ್ನು ಸುಧಾರಿಸಿ ಉಪಯುಕ್ತ ಜೀವನದ ಮೌಲ್ಯಗಳನ್ನ ಬೆಳೆಸುವುದು ಶಿಕ್ಷಣದ ಪ್ರಮುಖ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಸಂಶೋಧನಾ ವಿದ್ಯಾರ್ಥಿಯಾದ ಡಾ.ಬೈರಸಿದ್ದಪ್ಪ.ಜಿ.ಇ ಇವರು ‘ಕಸೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತಿರುವ ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆಯ ಮೇಲೆ ಪಭಾವ ಬೀರುವ ಶಾಲಾ ವಾತಾವರಣ ಹಾಗೂ ಮನೋ-ಸಾಮಾಜಿಕ ಅಂಶಗಳ ಒಂದು ಅಧ್ಯಯನ’ ಎಂಬ ಸಂಶೋಧನಾ ಅಧ್ಯಯನವನ್ನು ಕೈಗೊಂಡಿರುತ್ತಾರೆ.
Reviews
There are no reviews yet.