ಕೋವಿಡ್-19 ಎಂಬ ಮಹಾಮಾರಿಯು ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಕರಾಳ ಪರಿಣಾಮವನ್ನು ಉಂಟು ಮಾಡಿರುವುದು ಈ ಶತಮಾನದ ದುರದೃಷ್ಟಕರ ಅಂಶವಾಗಿದೆ. ಮಾನವ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಕೋವಿಡ್-19ರ ದುಷ್ಪರಿಣಾಮ ಸಾಮಾನ್ಯವಾಗಿದೆ ಇದಕ್ಕೆ ಶಿಕ್ಷಣ ಇಲಾಖೆಯು ಹೊರತಾಗಿಲ್ಲ. ಈ ಮಹಾಮಾರಿಯು ತಾತ್ಕಾಲಿಕವಾಗಿ ಕೆಲ ಲಕ್ಷ ಜನರನ್ನು ರೋಗಿಗಳನ್ನಾಗಿ ಮಾಡಿದ್ದು, ಹಾಗೂ ಸಹಸ್ರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇವು ತಕ್ಷಣದ ಪರಿಣಾಮಗಳಾದರೆ ಹಲವಾರು ಕ್ಷೇತ್ರಗಳು ದೂರಗಾಮಿಯಾದ ಪರಿಣಾಮಗಳಿಗೆ ಬಲಿಯಾಗಬೇಕಾಯಿತು. ಇದರಲ್ಲಿ ಶಿಕ್ಷಣ ಕ್ಷೇತ್ರವು ಸಹ ಒಂದಾಗಿದೆ. ರೋಗದ ಹರಡುವಿಕೆಯ ತೀವ್ರತೆಯ ಪರಿಣಾಮದಿಂದಾಗಿ ಶಾಲೆಗಳನ್ನು ಭೌತಿಕವಾಗಿ ನಿರ್ವಹಿಸಿ ಮಕ್ಕಳಿಗೆ ನೇರಕಲಿಕೆಯ ಅನುಭವಗಳನ್ನು ನೀಡಲಾಗದ ಪರಿಸ್ಥಿತಿಯು ನಿರ್ಮಾಣವಾಗಿದ್ದು, ಈಗ ಇತಿಹಾಸವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಹಂತದ ತರಗತಿಗಳನ್ನು ನಡೆಸಲಾಗದ ಅಸಹಾಯಕ ಸ್ಥಿತಿಯಲ್ಲಿ ಸರ್ಕಾರದ/ ಇಲಾಖೆಯ ನಿರ್ದೇಶನದಂತೆ ವೈವಿದ್ಯಮಯವಾದ ಕಲಿಕೆಯ ಅನುಭವಗಳನ್ನು ನೀಡುವ ಪ್ರಯತ್ನಗಳನ್ನು ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಚಂದನವಾಹಿನಿಯ ಮೂಲಕ ಪ್ರಸಾರಗೊಂಡ ಸಂವೇದ ತರಗತಿಗಳು, ವಿದ್ಯಾಗಮ (ಸಾಧ್ಯವಾದ ಪರಿಸ್ಥಿತಿಗಳಲ್ಲಿ) ಮತ್ತು ಸಾಮಾಜಿಕ ಮಾಧ್ಯಮ (ವಾಟ್ಸ್ಆ್ಯಪ್ ಗ್ರೂಪ್, ಯೂ-ಟ್ಯೂಬ್ ಲಿಂಕ್) ಮುಖಾಂತರ ಆನ್‌ಲೈನ್ ತರಗತಿಗಳನ್ನು ನಿಗಧಿತ ವೇಳಾಪಟ್ಟಿಯಂತೆ ನೀಡುವ ಪ್ರಯತ್ನವನ್ನು ಇಲಾಖೆ, ಶಿಕ್ಷಕರು ನಡೆಸಿದ್ದು ಇದರ ಪರಿಣಾಮಗಳು ಹಲವಾರು ಕಾರಣಗಳಿಂದಾಗಿ ನಿರೀಕ್ಷಿತ ಮಟ್ಟವನ್ನು ತಲುಪಲಾಗದಿದ್ದುದು ಎಲ್ಲರಿಗೂ ತಿಳಿದಿರುವ ಅಂಶವಾಗಿದೆ. ಕಲಿಕೆಯ ಕೊರತೆಗಳು, ಗೊಂದಲಗಳು, ನಷ್ಟ, ಪರಿಕಲ್ಪನೆಗಳು ಸ್ಪಷ್ಟವಾಗಿ ಮೂಡಿಲ್ಲವೆಂಬುದು ಎಲ್ಲಾ ಹಂತದ ಜನಪ್ರತಿನಿಧಿಗಳು, ಅಧಿಕಾರಿಗಳು, ಪೋಷಕರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳು ಮತ್ತು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದ್ದು ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ಯಾಂಡಮಿಕ್ ಅವಧಿಯಲ್ಲಿನ ಕಲಿಕೆಯ ವಾಸ್ತವತೆಯನ್ನು ಅರಿಯಲು ಸಮೀಕ್ಷೆಯೊಂದನ್ನು ಕೈಗೊಂಡು ಮತ್ತು ಅಗತ್ಯ ಅಧ್ಯಯನ, ವಿಶ್ಲೇಷಣೆ ಮತ್ತು ಅಗತ್ಯ ಪರಿಹಾರಾತ್ಮಕ ಕ್ರಮಗಳನ್ನು ರೂಪಿಸುವ ಸಂಬಂಧ ಯೋಜನೆಯೊಂದನ್ನು ಸಿದ್ದಪಡಿಸಲಾಗಿದೆ.
Sale
₹620.00 Original price was: ₹620.00.₹496.00Current price is: ₹496.00. ₹
₹410.00 Original price was: ₹410.00.₹328.00Current price is: ₹328.00. ₹
₹300.00 Original price was: ₹300.00.₹240.00Current price is: ₹240.00. ₹
₹280.00 Original price was: ₹280.00.₹224.00Current price is: ₹224.00. ₹
₹1,730.00 Original price was: ₹1,730.00.₹1,384.00Current price is: ₹1,384.00. ₹
₹765.00 Original price was: ₹765.00.₹612.00Current price is: ₹612.00. ₹
Covid-19_Ra Samayadalli Chitradurga Zilleyallina Shalegalallina Shaikshanika Prakriyegalu
Dr. Byrasiddappa G. E, Dr. G. V. Hariprasad, Dr. M. R. Nagaraj, Dr. P. Naveen, Dr. Savita H. S, Thimmaraj M. L 978-1-68576-528-6
HARD BOUND
FIRST EDITION
Academic Book, Education, Research and Development
Meet The Author
No products were found matching your selection.
No products were found matching your selection.
No products were found matching your selection.
No products were found matching your selection.
No products were found matching your selection.
No products were found matching your selection.
Be the first to review “Covid-19_Ra Samayadalli Chitradurga Zilleyallina Shalegalallina Shaikshanika Prakriyegalu” Cancel reply
Reviews
There are no reviews yet.