ನಾಡು ಹೊರನಾಡು ಹೊರದೇಶಗಳಲ್ಲಿ ಸಾವಿರಾರು ಉಪನ್ಯಾಸ ನೀಡಿದ ಪ್ರವಚನ ಶೂರ ఎంబ ಹೊಗಳಿಕೆ ಹಾಗೂ ಹೆಗ್ಗಳಿಕೆಯ ಮಾತನ್ನು ಎಲ್ಲಾ ಸಮಾರಂಭಗಳಲ್ಲಿ ನನ್ನನ್ನು ಪರಿಚಯಿಸುವಾಗ ಉವಾಚಿಸುತ್ತಲೇ ಇರುತ್ತಾರೆ. ನನ್ನ ನುಚ್ಚು ಪಾಂಡಿತ್ಯಕ್ಕೆ ತುಸು ಹೆಚ್ಚೇ ಎನಿಸುವ ಇದು ಅವರವರ ಅಭಿಮಾನದ ತೂಕದ ಗುಣವೇ ವಿನಃ ನನ್ನ ದೊಡ್ಡಸ್ತಿಕೆ ಏನೂ ಇಲ್ಲಾ ಎಂಬುದನ್ನು ವಿನಯದಿಂದ ಅರುಹುತ್ತೇನೆ. ಇನ್ನು ಇದರ ಜೊತೆಗೆ ನನ್ನ ಭಾಷಣಕ್ಕೆ ಹತ್ತು ಹಲವು ಗುಣ ವಿಶೇಷಗಳನ್ನು ಗುಣಗ್ರಾಹಿ ಶೋತುಗಳು ಆಗಾಗ ನೀಡುತ್ತಲೇ ಇರುತ್ತಾರೆ. ಇಂಟರ್ ಸಿಟಿ ರೈಲು, ಜೋಗದ ಜಲಪಾತ, ಗುಂಡು ಹೊಡೆದ ಹಾಗೆ, ಬುಲೆಟ್ ಟ್ರೈನ್, ಹುರುಳಿ ಕಾಳು ಹುರಿದಹಾಗೆ, ಹರಳು ಹುರಿದ ಹಾಗೆ, ಮಳೆ ಬಂದು ಬಿಟ್ಟಂಗೆ, ಗುಡುಗು ಸಿಡಿಲು ಹೊಡೆದಂಗೆ, ಎಂಬ ತರಹೇವಾರಿ ಸರ್ಟಿಫಿಕೇಟ್ ಕೊಡುತ್ತಲೇ ಇರುತ್ತಾರೆ. ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಭಾಷಣದ ವೇಗಕ್ಕೆ ಸಿಟ್ಟು ಬಂದು. ಸ್ವಲ್ಪ ನಿಧಾನಕ್ಕೆ ಮಾತನಾಡು ಅಣ್ಣಾ, ಒಳ್ಳೆ ಕತ್ತೆ ಉಚ್ಚೆ ಹೊಯ್ದರಿಗೆ ಆಯ್ತು ಅಂತಾ ನೇರಾ ನೇರ ಹೇಳುತ್ತಾರೆ. ಇವೆಲ್ಲ ಅಭಿಪ್ರಾಯದ ಅಭಿವ್ಯಕ್ತಿಗೆ ಇರುವ ಒಟ್ಟಾದದ ಮುಖ ಎಂಬುದೇ ಮುಖ್ಯ ಇನ್ನು ನನ್ನ ಓತಪ್ರೋತ ಮಾತಿಗೆ ದಕ್ಕಿರುವ ಅತಿ ಹೆಚ್ಚು ಧೃಢೀಕರಣ ಎಂದರೆ ಅದು ಅಡ್ಡ ಮಳೆ (ಆಡಳೆ) ಬಂದಂಗೆ ಆಯ್ತು ಎನ್ನುವ ಅಭಿ ದಾನ, ಸಹೃದಯ ಕೇಳುಗರು ಕೊಟ್ಟ ಶೀರ್ಷಿಕೆಯನ್ನೇ ಇಟ್ಟು ಓದುಗಬಳಗ ಕೈ ಈ ನನ್ನ ಕೃತಿ ನೀಡುತಿದ್ದೇನೆ. ಒಬ್ಬ ಸಾಹಿತಿ ಬರಹಗಾರನಿಗೆ ಬೇಕಿರುವುದು ರಾಜ ತೊಡಿಸುವ ಕಂಕಣ ಅಲ್ಲ, ಬದಲಾಗಿ ಓದುಗಪ್ರಭು ನೋಡುವ ಕಣ್ ಕಣಾ, ಈ ನನ್ನ ಪ್ರಿಯ ಮಾತಿನ ಮೇಲೆ ನಂಬಿಕೆ ಇಟ್ಟು ನಿಮ್ಮ ಕಣ್ ದೃಷ್ಟಿಗೆ ಇದನ್ನು ಒಪ್ಪಿಸುತ್ತಿ ದ್ದೇನೆ. ಅಲ್ಲಲ್ಲಿ ಮಾಡಿದ ಭಾಷಣ, ಆಗಾಗ ಬರೆದ ಲೇಖನ, ಪತ್ರಿಕೆಯಲ್ಲಿ ಬಿಂಬಿಸಿದ ಸುದ್ದಿ, ಇವೆಲ್ಲ ವುಗಳ ಮಿಶ್ರಣದ ಹೂರಣ ಈ ನನ್ನ ಅಡ್ಡ ಮಳೆ ಹೊತ್ತಿಗೆಯ ಹುಟ್ಟಿಗೆ ಕಾರಣ ಮತ್ತು ಪ್ರೇರಣ. ನನ್ನ ಸಾಹಿತ್ಯದ ಸಿರಿ ಮೊಳಕೆಗೆ ನೀರೆರದು ಪೋಷಿಸಿದ ನಾಡಿನ ಹಿರಿಯ ಶರಣ ಅನುಭಾವಿ ಅಪ್ಪಾಜಿ ಗೊ. ರು. ಚ. ರವರು ನನ್ನ ವಜ್ರ ಮಹೋತ್ಸವ ಸಂಧರ್ಭದಲ್ಲಿ ಎಣೆದು ಪೋಣಿಸಿದ ಅಣಿಮುತ್ತನ್ನೇ ಈ ಪುಸ್ತಕಕ್ಕೆ ಕಂಠೀಹಾರವಾಗಿ ಬಳಸಿದ್ದೇನೆ. ಪೂಜ್ಯ ಸುತ್ತೂರು ಶ್ರೀ ಮಠದ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು “ಈ ಅಡ್ಡ ಮಳೆ” ಗೆ ಅನುಗ್ರಹದ ನುಡಿ ಸಿಂಚನ ಮಾಡಿದ್ದು ನನ್ನ ಸೌಭಾಗ್ಯ, ಪೂಜ್ಯ ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳ ಹದ ತುಂಬಿದ ಹೊನ್ನುಡಿಯೇ ಈ ಕೃತಿಯಿಂದ ಓದುಗರಿಗೆ ಸಿಗುವ ಸಮೃದ್ಧ ಸ್ವಾದ.ನನ್ನ ಅರಿವಿನ ಲೋಕದ ವಿಸ್ತಾರಕ್ಕೆ ಸದಾ ಆಶೀರ್ವದಿಸಿದ ತರಳಬಾಳು ಗುರು ಪರಂಪರೆಗೆ ನಾನು ಯಾವತ್ತೂ ಋಣಿ. ನನ್ನ ವಚನ ಪ್ರವಚನಕ್ಕೆ ವೇದಿಕೆ ಕಲ್ಪಿಸಿ ಹರಸಿದ ನಾಡಿನ ಎಲ್ಲಾ ಮಠ-ಪೀಠ-ಮಂದಿರಗಳಿಗೆ ನನ್ನದು ಸದಾ ಬಾಗಿದ ಶಿರ ಮತ್ತು ಮುಗಿದ ಕೈ. ಅವರವರ ಮನೆ ಅಂಗಳದಲ್ಲಿ ನಡೆದ ಮಂಗಳಕಾರ್ಯ ಗಳಿಗೆ ನನ್ನನ್ನು ಕರೆಯಿಸಿ ಮಾತನಾಡಿಸಿದ ಸಾವಿರಾರು ಅತಿಥೇಯ ಮನೆ ಮನ ಗಳಿಗೆ ನನ್ನ ಸಾವಿರದ ಶರಣು ಶರಣಾರ್ಥಿ. ಹೊರದೇಶದಲ್ಲೂ ನನ್ನ ಭಾಷಣಗಳಿಗೆ ವೇದಿಕೆ ಒದಗಿಸಿದ ಈಗಲೂ ಬಯಸುವ ಅಮೇರಿಕಾ, ದುಬೈ, ಅಭುದಭಿ, ಆಸ್ಟ್ರೇಲಿಯಾ, ಶ್ರೀಲಂಕಾ ಹಲವು ದೇಶಗಳಲ್ಲಿ ನೆಲೆ ನಿಂತ ಹೊರನಾಡ ಕನ್ನಡಿಗರಿಗೆಲ್ಲ ಸಪ್ರೇಮ ವಂದನೆಗಳು. ಈ ಪುಸ್ತಕ ಪ್ರಕಾಶನದ ಹೊಣೆ ಹೊತ್ತ Iterative International Publishers ಮಾಲಿಕರಾದ ನಂಜೇಶ್ ಬೆಣ್ಣೂರ್, ಇದಕ್ಕೆ ಬೆಂಬಲವಾಗಿ ನಿಂತ ಐಸಿರಿ ಫೌಂಡೇಶನ್-ಟುಡೇ ಐಸಿರಿ ಸಂಸ್ಥೆಗೆ ನಾನು ಸದಾ ಆಭಾರಿ. ನನ್ನ ಆಶಯದ ಮಾತಿನೊಂದಿಗೆ ಈ ನನ್ನೆರಡು ಮೊದಲ ನುಡಿಗಳಿಗೆ ವಿರಾಮ.
Sale
₹499.00 Original price was: ₹499.00.₹399.20Current price is: ₹399.20. ₹
₹350.00 Original price was: ₹350.00.₹280.00Current price is: ₹280.00. ₹
₹199.00 Original price was: ₹199.00.₹159.20Current price is: ₹159.20. ₹
₹499.00 Original price was: ₹499.00.₹399.20Current price is: ₹399.20. ₹
₹350.00 Original price was: ₹350.00.₹280.00Current price is: ₹280.00. ₹
₹452.00 Original price was: ₹452.00.₹361.00Current price is: ₹361.00. ₹
Addamale (Bele Belesi Ile Ulisuva Hadamale)
Meet The Author
No products were found matching your selection.
Be the first to review “Addamale (Bele Belesi Ile Ulisuva Hadamale)” Cancel reply

Reviews
There are no reviews yet.