ಪಶ್ಚಿಮ ಘಟ್ಟ ಪ್ರದೇಶದ ದುರ್ಗಮ ಪ್ರದೇಶ ಮತ್ತು ಹಸಿರು ಪರಿಸರವೇ ನನಗೆ ಈ ಕಾದಂಬರಿ ಬರೆಯಲು ಮೊದಲ ಪ್ರೇರಣೆ, ಎರಡನೇಯದಾಗಿ ಕಾಳಯ್ಯನ ವ್ಯಕ್ತಿತ್ವ! “ಕಾಳಯ್ಯ” ಕಾದಂಬರಿಯಲ್ಲಿ ಕಾಳಯ್ಯನೇ ಈ ಕತೆಯ ಕಥಾನಾಯಕ. ಈತ ಮೂಲತಃ ತಮಿಳು ನಾಡಿನವ. ನನ್ನ ತಂದೆ ತಾಯಿಯೊಂದಿಗೆ ಕಲ್ಲು ಕೊರೆ ಕೆಲಸಕ್ಕೆ ಬಂದಗಾ ಕಾಳಯ್ಯ ಇನ್ನು ಚಿಕ್ಕವ ಇವನ ಸುತ್ತ ಹಣಿಯಲ್ ಪಟ್ಟ ಕತೆ.
ಕಾಳಯ್ಯ ತನ್ನ ಕೆಟ್ಟ ಕುಡುಕ ಪ್ರವೃತ್ತಿಯನ್ನು ಬಿಟ್ಟು ಕರ್ನಾಟಕದ ನೆಲದಲ್ಲಿ ಬಾಳಿ ಬದುಕಿದ ಕತೆ. ಆತನ ಇನ್ನೊಂದು ಸುಂದರ ಮುಖದ ಪರಿಚಯ ನಿಸ್ವಾರ್ಥತೆಯ ಗುಣ ಎಲ್ಲವನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಅಲ್ಲದೆ ಪಶ್ಚಿಮ ಘಟ್ಟದ ಸುಂದರ ಪ್ರಕೃತಿಯ ಪಾತ್ರ ಕೂಡ ಈ ಕಾದಂಬರಿಯಲ್ಲಿದೆ.
Reviews
There are no reviews yet.